Manushya Jalika in Karnataka

ಓಂ ಶಾಂತಿ ಎಂಬ ಪಧದಿಂದ ಪ್ರಪಂಚದ ಶೃಷ್ಟಿ ನಡೆಯಿತು ಎನ್ನುವುದು ಹಿಂದೂ ವೇಧಗಳು ಹೇಳುತ್ತವೆ
ಶಾಂತಿಗಾಗಿ ಏಸು ಕ್ರಿಸ್ತ (ದೇವರು ಅವರಿಗೆ ಶಾಂತಿ ಕರುಣಿಸಲಿ) ಶಿಲುಬೆಗೆ ಏರಿದರು ಎಂದು ಬೈಬೇಲ್
ಇಸ್ಲಾಂ ಎನ್ನುವುದರ ಅರ್ಥವೇ ಶಾಂತಿ ಎನ್ನುವುದಾಗಿದೆ, 5 ಹೊತ್ತಿನ ಪ್ರಾರ್ತನೆಯಲ್ಲಿ ಎಡ ಬಾಗ ಮತ್ತು ಬಲ ಬಾಗಕ್ಕೆ ಮುಕ ತಿರುಗಿಸಿ ದೇವರೇ ನೀನು ಈ ಪ್ರಪಂಚದ ಎಲ್ಲ ವರ್ಗದ ಜನರಿಗೂ ಶಾಂತಿ ಕರುಣಿಸು ಎನ್ನುವ ಶ್ಲೋಕವನ್ನು ಉಚ್ಚರಿಸದೆ ನಮಾಜ್ ಪೂರ್ತಿಯಗುದಿಲ್ಲ. ...

ಅಲ್ಲಹುಮ್ಮ ಅಂತ ಸಲಾಂ ವ ಮಿಂಕ ಸಲಾಂ..... ಎಂದು ಇಸ್ಲಾಂ ಪ್ರತಿಪಾದಿಸುತ್ತದೆ....
ಇದರೆಡೆಯಲ್ಲಿ ಭಯೋತ್ಪಾದನೆ ಮತ್ತು ಕೋಮುವಾದ ಎಲ್ಲಿ ನುಸುಳಿಕೊಂಡಿತ್ತು ಎನ್ನುವುದೇ ತಿಳಿಯದ ವಿಷಯ...
ಯಾವ ಧರ್ಮ ಗ್ರಂಥಗಳು ಶಾಂತಿಯ ಹೊರತು ಭಯೋತ್ಪಾದನೆಯನ್ನು ಪ್ರತಿಪಾದಿಸಲಿಲ್ಲ ...
ಕೇವಲ ತನ್ನ ಆರ್ಥಿಕ, ರಾಜಕೀಯ ಮತ್ತು ಅಧಿಕಾರದ ವ್ಯಾಮೊಹಕ್ಕಾಗಿ ಮನುಷ್ಯನು ಅಲ್ಪ ಸ್ವಲ್ಪ ಧಾರ್ಮಿಕ ವಿದ್ಯೆಯನ್ನು ಕಲಿತು ಅದನ್ನು ತನ್ನ ಸಹ ಜೀವಿಯ ನಾಶಕ್ಕಾಗಿ ದುರುಪಯೋಗ ಪಡಿಸುತ್ತಿರುವನು. ಕಲಿಯುಗದ ನಿಶಾನೆ ಎಂಬಂತೆ ನಾವೆಲ್ಲಾ ಅರಿತೋ ಅರಿಯದೆಯೋ ಅದನ್ನು ಜೈಕಾರ ಕೂಗಿ ಬೆಂಬಲಿಸುತ್ತಿದ್ದೇವೆ...
ಇನ್ನಾದರೂ ಎಚ್ಚೆತ್ತುಕೊಳ್ಳೋಣ ಗೆಳೆಯರೇ... ಧರ್ಮದ ಹೆಸರಲ್ಲಿ ನಡೆಯುವ ಅಧಾರ್ಮಿಕ ಅನ್ಯೆತಿಕತೆಯನ್ನು ಬೇರು ಸಹಿತಕಿತ್ತಾಕೋಣ...
ರಾಷ್ಟ್ರ ರಕ್ಷಣೆಗಾಗಿ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ SKSSF ಕರ್ನಾಟಕದ ಶ್ವೇಥದಾರಿ ಧರ್ಮ ವಿಧ್ಯಾರ್ತಿ ಪಡೆಯು ನಡೆಸುವ
ಮಾನವ ಸರಪಳಿ-2013
ಇದೆ ಬರುವ ಘನ ರಾಜ್ಯ ದಿನದಂದು 26 ನೆ ಜನವರಿ 2013 ರಂದು ಕರ್ನಾಟಕ, ಕೇರಳ, ತಮಿಳ್ನಾಡು ಮತ್ತು ದೆಹಲಿ ಯಲ್ಲಿ ಭಯೋತ್ಪಾದನೆಯ ವಿರುದ್ದ ಪ್ರತಿಜ್ಞಾ ಸ್ವೀಕಾರವು ನಡೆಯಲಿದೆ.
ಸಂಜೆ 4 ಘಂಟೆಗೆ ಮಂಗಳೂರಿನ ಸುಳ್ಳ್ಯದಲ್ಲಿ ಹಾಗು ಕೊಡಗಿನ ನೆಲ್ಲ್ವಾಹುದುಕೇರಿಯಲ್ಲಿ ನಡೆಯಲಿದೆ
ಭಾಗವಹಿಸಿರಿ ವಿಜಯಗೊಲಿಸಿರಿ

ನಮ್ಮ ನಾಡಿನ ರಕ್ಷಣೆಗಾಗಿ ಜಾತಿ ಧರ್ಮದ ಬೇಲಿಗಳನ್ನು ಕಿತ್ತೊಗೆದು ಒಗ್ಗುಡೋಣ —

ರಾಷ್ಟ್ರದ ಒಳಿತಗಾಗಿ ಸಮುದಾಯಿಕ ಸೌಹಾರ್ದತೆಗಾಗಿ ಕೈ ಜೋಡಿಸಿ SKSSF ನೊಂದಿಗೆ